News & Events

ಗಣರಾಜ್ಯೋತ್ಸವ ಕಾರ್ಯಕ್ರಮ, ಎಕ್ಸ್ ಪರ್ಟ್ ಪದವಿ ಪೂರ್ವ ಕಾಲೇಜು, ಕೊಡಿಯಲ್ ಬೈಲ್, ಮಂಗಳೂರು.

  • Friday, January 27th, 2017
Expert Educational and Charitable Foundation::Classroom & Postal Coaching, PU Science College

ಗಣರಾಜ್ಯೋತ್ಸವ ಕಾರ್ಯಕ್ರಮ, ಎಕ್ಸ್ ಪರ್ಟ್ ಪದವಿ ಪೂರ್ವ ಕಾಲೇಜು, ಕೊಡಿಯಲ್ ಬೈಲ್, ಮಂಗಳೂರು.

ಭಗವತಿ ದೇವಸ್ಥಾನದ ವಠಾರದಲ್ಲಿ ಎಕ್ಸ್ ಪರ್ಟ್ à²ªà²¦à²µà²¿ ಪೂರ್ವ ಕಾಲೇಜಿನಿಂದ ಗಣರಾಜ್ಯೋತ್ಸವ ಕಾರ್ಯಕ್ರಮ ನಡೆಯಿತು. ಕಾಲೇಜಿನ ಪಾಂಶುಪಾಲರಾದ ಪ್ರೊ.ರಾಮಚಂದ್ರ ಭಟ್ ಅವರು ಧ್ವಜಾರೋಹಣವನ್ನು ನೇರವೇರಿಸಿದರು.
ವಿದ್ಯಾಥರ್ಿಗಳನ್ನುದ್ದೇಶಿಸಿ ಮಾತನಾಡಿದ ಅವರು ನಮ್ಮ ದೇಶ ಪ್ರಜಾಪ್ರಭುತ್ವ ರಾಷ್ಟ್ರ. ಹಲವು ಭಾಷೆ, ಸಂಸ್ಕೃತಿ, ಸಮುದಾಯಗಳನ್ನು ಹೊಂದಿರುವ ಏಕತೆಯ ದೇಶ. ದೇಶದ ಸ್ವಾತಂತ್ರ್ಯ ಪ್ರತಿಯೊಬ್ಬ ಪ್ರಜೆಗೂ ದಕ್ಕ ಬೇಕು. ನಮ್ಮ ದೇಶದ ಗಣರಾಜ್ಯ ವ್ಯವಸ್ಥೆಯಲ್ಲಿ ಪ್ರಜೆಗಳು ಸಕ್ರೀಯವಾಗಿ ಪಾಲ್ಗೊಳಬೇಕು ಆಗ ಪ್ರಜಾಪ್ರಭುತ್ವಕ್ಕೆ ವಿಶಿಷ್ಟತೆಯ ಅರ್ಥಬರಲು ಸಾಧ್ಯ. ದೇಶದ ಪ್ರಗತಿಯ ನೆಲೆಯಲ್ಲಿ ಸಮಾನತೆ ಇನ್ನಷ್ಟು ಪರಿಣಾಮಕಾರಿಯಾಗಿ ಸಫಲತೆ ಕಾಣಬೇಕು. ಅರುಂದತಿ ರಾಯ್ ಅವರ ವಿಚಾರಗಳನ್ನು ವಿದ್ಯಾಥರ್ಿಗಳೊಂದಿಗೆ ಹಂಚಿಕೊಂಡರು. ಯುವ ಜನತೆ ಕಠಿಣ ಪರಿಶ್ರಮದ ಮೂಲಕ ದೇಶಕ್ಕಾಗಿ ಮತ್ತು ಸಮಾಜದ ಹಿತಕ್ಕಾಗಿ ಶ್ರಮಿಸಬೇಕು ಎಂದು ಹೇಳಿದರು.

ವೇದಿಕೆಯಲ್ಲಿ ಭೌತಶಾಸ್ತ್ರ ವಿಭಾಗದ ಮುಖ್ಯಸ್ಥರಾದ ಶ್ರೀ ವಿಜೇತ್ ನಾಯಕ್, ರಸಾಯನ ಶಾಸ್ತ್ರ ವಿಭಾಗದ ಮುಖ್ಯಸ್ಥ ಮನೋಜ್ ಶಾನುಭಾಗ್ ಕೆ, ಗಣಿತ ವಿಭಾಗದ ಉಪನ್ಯಾಸಕರಾದ ಶ್ರೀ ದೀಪಕ್ ಎಸ್ ಪೊಥ್ನಿಸ್, ಭೌತಶಾಸ್ತ್ರ ವಿಭಾಗದ ಉಪನ್ಯಾಸಕ ಶ್ರೀಧರ್ ರಾವ್, ಕಾರ್ಯಕ್ರಮ ಸಂಯೋಜಕ ಮತ್ತು ಕನ್ನಡ ವಿಭಾಗದ ಮುಖ್ಯಸ್ಥ ಶ್ರೀ ಕರುಣಾಕರ ಬಳ್ಕೂರು, ಸಾಂಸ್ಕೃತಿಕ ಕಾರ್ಯಕ್ರಮ ಸಂಯೋಜಕಿ ನೀಹಾ ಅಬ್ದುಲ್ ಶೇಖ್ ಮತ್ತು ಭೌತಶಾಸ್ತ್ರ ವಿಭಾಗದ ಉಪನ್ಯಾಸಕ ಸತೀಶ್ ಕಾಮತ್ ಇನ್ನಿತರರು ಉಪಸ್ಥಿತರಿದ್ಧರು.
ಉಪನ್ಯಾಸಕ ಶ್ರೀ ಗಣೇಶ್ ಹೆಬ್ಬಾರ್ ನಿರೂಪಿಸಿ, ವಂದಿಸಿದರು.